ಬರ,ನೆರೆ, ಸಾವು, ನೋವಿನಲಿ
ಜಾಗತಿಕ ತಾಪಮಾನದಲಿ
ನೊಂದು, ಬೆಂದು
ನಡುವೆ ಅಲ್ಲೊಂದು ಇಲ್ಲೊಂದು
ಸಾಧನೆಯ, ಸಂತಸದ
ದಿನ, ಘಳಿಗೆಗಳಲಿ ಮಿಂದು
ಕಳೆದು ಹೋಯಿತು ವರುಷ
ಬರುತಿದೆ ಹೊಸ ವರುಷ
ತರಲಿ ಪ್ರತಿ ನಿಮಿಷ
ಎಲ್ಲರಿಗು ಹರುಷ
ಎದ್ದೇಳಿ ಗೆಳೆಯ ಗೆಳತಿಯರೇ
ಬನ್ನಿ, ಒಟ್ಟಾಗಿ ಮಾಡೋಣ ಸಂಕಲ್ಪ
ದೊರಕಿಸಲು ಹಸಿದವರಿಗನ್ನವನು,
ನಿರ್ವಸತಿಗರಿಗಾಶ್ರಯವನು,
ಬರಿಯ ಬರಹದಲೇನು ಬಂತು
ಕೂಡಿ ಎಲ್ಲರು ನೀಡಿ ಬಲವನು
ಮಾಡಿದರೆ ಕೆಲಸ, ಆಗುವುದು ಮನಕೆ ಹರುಷ
ಆ ದೇವ ಮೆಚ್ಚುವನು ಈ ಕೆಲಸ
ಪ್ರೀತಿ, ಸ್ನೇಹ, ಸಹಬಾಳ್ವೆ
ಸಹಕಾರ, ಸಮರಸದಲಿ
ಆಗುವುದು ಈ ಭೂಮಿ ಕೈಲಾಸ
3 ಕಾಮೆಂಟ್‌ಗಳು:
ದೇವಿಸುತೆಯವರಿಗೆ ಹೊಸವರುಷದಂದು ಉತ್ತಮ ಯೋಜನೆಯ ಮನಸಾಗಿರುವುದು ಬಹಳ ಪ್ರಶಂಸನೀಯ....ಕವನ ಸಡಗರದ ಜೊತೆಗೆ ನಮ್ಮ ಜವಾಬ್ದಾರಿ ಏನು ಎನ್ನುವುದನ್ನೂ ತೋರುತ್ತೆ...ಚನ್ನಾಗಿದೆ ಕವನ.
ದೇವಿಸುತೆಯವರೇ, ನಿಮ್ಮ ಬ್ಲಾಗ್ ಪೋಸ್ಟ್ ನವೀಕರಿಸಿಲ್ಲ....ಆದ್ರೂ ನಿಮ್ಮ ಈ ಕವಿತೆಯನ್ನು ನೋಡಿಲ್ಲ ಹೇಗೆ? ಚನಾಗಿದೆ, ಕಳೆದ ವರ್ಷದ ಏಳು ಬೀಳುಗಳನ್ನು ತೋರಿಸಿ ಹೊಸದನ್ನು ಹೇಗೆ ಬರಮಾಡಿಕೊಳ್ಳಬೇಕೆಂಬುದಕ್ಕೆ ಕರೆ..
tumbaa chennagide
ಕಾಮೆಂಟ್ ಪೋಸ್ಟ್ ಮಾಡಿ