ಪ್ರೀತಿಯ ಓದುಗರಿಗೆ ಭಾವಧಾರೆಯ ಬರಹಗಾರ್ತಿಯ ನಮಸ್ಕಾರ .
ಇದು ನನ್ನ ಮೊದಲ ಬ್ಲಾಗ್ ಧಾರೆ ,
ನನ್ನ ಮನಸಿನ ಮೌನ ಧಾರೆ, ಓದಿ ,ಹೇಗಿತ್ತು ? ತಿಳಿಸಿ, ಹರಸಿ, ಬೆಳೆಸಿ.
ಇದು ಅಮ್ಮನನ್ನು ಕಾಣದ ಎಲ್ಲರ ಮನದ ಕವನ
ಅಮ್ಮನಿಗೆ
ಅಮ್ಮ ನನ್ನ ಮನದಲಿಂದು
ನಿನ್ನ ನೆನಪು ಮೂಡಿ ಬಂದು
ಮರೆತೆ ನಾನು ನನ್ನನು
ಬರೆದೆ ಕವಿತೆಯೊಂದನು
ಪ್ರಕೃತಿಯಲ್ಲಿ ಪರಿ ಪರಿಯಲಿ
ಕಂಡೆ ನಾನು ನಿನ್ನನು
ಕಾಮಧೇನು ತಾಯಿ ನೀನು
ಬಂದು ಮುದ್ದಿಸೆನ್ನನು
ಜನುಮ ಕೊಟ್ಟು ಜಗವ ಬಿಟ್ಟು
ಹೋದೆ ಏಕೆ ತಾಯೇ
ಅಳುವ ಮನಕೆ ಬೆಳೆಕು ಬಿಟ್ಟು
ತೋರು ನಿನ್ನ ಛಾಯೆ
---ದೇವಿಸುತೆ
********
2 ಕಾಮೆಂಟ್‌ಗಳು:
ನಮಸ್ಕಾರ ದೇವಿಸುತೆ ಅವರೇ, ಬ್ಲಾಗ್ ಲೋಕಕ್ಕೆ ಸ್ವಾಗತ. ಮೊದಲ ಕವನವೇ ಅತ್ಯದ್ಭುತವಾಗಿ ಬರೆದಿದ್ದೀರಿ. ಕೊನೆಯ ನಾಲ್ಕು ಸಾಲುಗಳು ಮನಸ್ಸಿಗೆ ತುಂಬಾ ಹಿಡಿಸಿದುವು.
tumba channagi madam..
ಕಾಮೆಂಟ್ ಪೋಸ್ಟ್ ಮಾಡಿ